Skip to main content

Posts

Featured

ಮದುವೆಯ ನಂತರದ ಬದುಕು

ಮದುವೆಗಳು ಸ್ವರ್ಗದಲ್ಲಿ ನಿಶ್ಚಯಿಸಲ್ಪಡುತ್ತವೆ. ಆದರೆ ದಂಪತಿಗಳು ಬಾಳ್ವೆ ಮಾಡಬೇಕಾಗಿರುವುದು ಮಾತ್ರ ಭೂಮಿಯ ಮೇಲೆ.  ಸ್ವರ್ಗದ ನಿಯಮಗಳು ಏನಿವೆಯೋ ನನಗೆ ಗೊತ್ತಿಲ್ಲ. ಆದರೆ ಭೂಮಿಯ ಮೇಲೆ ಗಂಡು-ಹೆಣ್ಣು ಇಬ್ಬರಿಗೂ ತಮ್ಮ ತಮ್ಮ ಸ್ವಂತ ಅಭಿಪ್ರಾಯ ಎಂಬುದು ಇದೆ, ಇಬ್ಬರಿಗೂ ಪ್ರತ್ಯೇಕವಾದ ಮನಸ್ಸುಗಳಿವೆ, ಬೇರೆ ಬೇರೆಯಾದ ಯೋಚನಾ ಲಹರಿಗಳಿವೆ, ಅಹಮ್ ಇದೆ, ಹಠವಿದೆ,  ಸ್ವಾಭಿಮಾನವಿದೆ..  ಇಷ್ಟೆಲ್ಲ ವೈರುಧ್ಯಗಳಿದ್ದೂ ಇಂತಿಪ್ಪ ದಂಪತಿಗಳು‌ ಒಂದೇ ಸೂರಿನಡಿಯಲ್ಲಿ ವಾಸ ಮಾಡಬೇಕಿದೆ. ಒಂದು ದಿನ ದಿಢೀರ್ ಅಂತ ಆಕೆ ನಿಮ್ಮ ಮನೆಗೆ ಕಾಲಿಡುತ್ತಾಳೆ. ಜೊತೆಯಲ್ಲಿಯೇ ನಿಮ್ಮ ಜೀವನದೊಳಗೂ... ಒಂದು ಜೀವ ನಮಗಾಗಿ ಮಿಡಿಯುತ್ತದೆ, ನಮಗಾಗಿ ಕಾಯುತ್ತದೆ, ನಮಗಾಗಿ ಮರುಗುತ್ತದೆ ಎಂದರೆ ಯಾರು ತಾನೇ ಬೇಡ ಎನ್ನುತ್ತಾರೆ?  ಆದರೆ ಇಬ್ಬರಿಗೂ ಒಬ್ಬರಿಗೊಬ್ಬರು ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕೇ ಬೇಕು. ಅದಕ್ಕಿಂತಲೂ ಮೊದಲು ಅವರ ವೈಯುಕ್ತಿಕ ಹಿನ್ನೆಲೆ ಬಗ್ಗೆ ತಿಳಿಯಬೇಕು. ಜಾತಕದಲ್ಲಿ ಅವರ ಗುಣ, ಸ್ವಭಾವವನ್ನು ತಿಳಿದುಕೊಂಡಿದ್ದರೂ ಸಹ ಪ್ರತಿಯೊಬ್ಬರೂ ಆಸೆ ಪಡುವುದು ತಾವು ಹೇಳಿದ ಹಾಗೆ ಕೇಳುವ ಸಂಗಾತಿಗಳನ್ನು.  ಉದಾಹರಣೆಗೆ ಸಿಂಹರಾಶಿಯವರು ಸ್ವತಂತ್ರ ಆಲೋಚನೆ ಹೊಂದಿರುತ್ತಾರೆ ಎಂದು ಗೊತ್ತಿದ್ದರೂ ಸಹ, ಆ ರಾಶಿ ಹೊಂದಿರುವ ನಮ್ಮ ಸಂಗಾತಿ ನಮ್ಮ ಮಾತು ಕೇಳಲಿ ಎಂದು ಬಯಸುತ್ತೇವೆ. ನಮ್ಮ ಮಾತು ಕೇಳಿದರೆ ಮಾತ್ರ ಒಳ್ಳೆಯವರು,  ಕ...

Latest posts

ಅವಳು ನಂಬರ್ ಚೇಂಜ್ ಮಾಡ್ತಾಳೆ

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ

ಆದರ್ಶ ರಾಮನೋ ರಾವಣನೋ..

ನನ್ನ ಹೆಂಡತಿ ಚಂದವಿಲ್ಲ

ವಧುಪರೀಕ್ಷೆ ಅಂದು-ಇಂದು